ಅಭಿಪ್ರಾಯ / ಸಲಹೆಗಳು

ಜಿಲ್ಲೆಯ ಸ್ವವಿವರ

ಭೌಗೋಳಿಕ ವೈಶಿಷ್ಟ್ಯಗಳು:-

ಯಾದಗಿರಿ ಜಿಲ್ಲೆ 5270 ಚದರ ಕೀ. ಮೀ ಪ್ರದೇಶವನ್ನು ಆಕ್ರಮಿಸಿದೆ. ಇದು ರಾಜ್ಯದ ಎರಡನೇ ಚಿಕ್ಕ ಜಿಲ್ಲೆಯಾಗಿದೆ. ರಾಜ್ಯದ ಒಟ್ಟು ವಿಸ್ತೀರ್ಣದಲ್ಲಿ 8.46% ಪ್ರತಿಶತ ಪ್ರದೇಶವನ್ನು ಒಳಗೊಂಡಿರುವ ಬೌಗೋಳಿಕ ಪ್ರದೇಶವಾಗಿದೆ. ಜಿಲ್ಲೆ ಒಂದು ವಿಭಾಗದ ಉಪ ವಿಭಾಗದಿಂದ ಕೂಡಿರುತ್ತದೆ. ಹಾಗೂ ಜಿಲ್ಲೆ 3 ತಾಲ್ಲೂಕುಗಳು ಮತ್ತು 3 ಶೈಕ್ಷಣಿಕ ವಲಯಗಳಿಂದ ಕೂಡಿದ್ದು, ಅವುಗಳೆಂದರೆ ಯಾದಗಿರಿ,ಶಹಾಪೂರ ಮತ್ತು ಸುರಪುರ. ಜಿಲ್ಲೆಯಲ್ಲಿ ಒಟ್ಟು 16 ಹೋಬಳಿಗಳು, 3 ನಗರಸಭೆ, 3ಪುರಸಭೆ, 1 ಅಜಿತ ಪ್ರದೇಶ ಸಮಿತಿ, 3 ತಾಲೂಕಾ ಪಂಚಾಯತ, 117 ಗ್ರಾಮ ಪಂಚಾಯತ್, 51 ಹಳ್ಳಿಗಳು ಮತ್ತು 4 ವಿಧಾನಸಭಾ ಮತಕ್ಷೇತ್ರಗಳು, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲೆ ಯಾದಗಿರಿ, ಶಹಾಪೂರ ಮತ್ತು ಸುರಪುರ ವಿಧಾನಸಭಾ ಮತಕ್ಷೇತ್ರಗಳು ರಾಯಚೂರು ಲೋಕಸಭಾ ವ್ಯಾಪ್ತಿ ಮತ್ತು ಮಿಠಕಲ್ ವಿಧಾನಸಭಾ ಕ್ಷೇತ್ರಗಳು ಗುಲಬರ್ಗಾ ಲೋಕಸಭಾ ವ್ಯಾಪ್ತಿಯನ್ನು ಹೊಂದಿದೆ.

 

ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳು:-

ಯಾದಗಿರಿ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ. ಜಿಲ್ಲೆಯಲ್ಲಿ ಪೂರ್ವ ಪರಿವರ್ತನೆ ಮತ್ತು ಈಶಾನ್ಯ ಶುಷ್ಕ ವಲಯ ಎಂದು ಎರಡು ಹವಮಾನ ವಲಯಗಳಾಗಿ ವಿಂಗಡಿಸಲಾಗಿದೆ. ಈ ವಲಯಗಳು ಮಳೆ ಆಧಾರಿತ ಒಣ ಭೂಮಿ ಕೃಷಿ ಪ್ರದೇಶದ ಪ್ರಾಬಲ್ಯವನ್ನು ತಿಳಿಸುತ್ತದೆ. ಸಾಮಾನ್ಯವಾಗಿ ಮಳೆ ಪ್ರಮಾಣ 636 ಮೀ.ಮೀ ಇರುತ್ತದೆ. ಹವಾಗುಣವು ಸಾಮಾನ್ಯವಾಗಿ ಶುಷ್ಕ ಮತ್ತು ಆರೋಗ್ಯಕರವಾಗಿರುತ್ತದೆ,ಜಿಲ್ಲೆಯ ಬೌಗೋಳಿಕ ಪ್ರದೇಶ 516088 ಹೆಕ್ಟರ್ ಇದ್ದು, ಇದು ಒಟ್ಟು ಭೂಮಿ ಪ್ರದೇಶದಲ್ಲಿ ಶೇಕಡಾ 75.11 ಆಗಿದೆ. ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಬೆಳೆಗಳು, ತೊಗರಿ, ಸೂರ್ಯಕಾಂತಿ ಮತ್ತು ಕಡಲೇಕಾಯಿ ಜೋಳ ಆಗಿರುತ್ತದೆ. ಉತ್ಪಾದಕತೆಯ ವಿಚಾರದಲ್ಲಿ ಪ್ರಮುಖ ಬೆಳೆಗಳ ಇಳುವರಿ ರಾಜ್ಯದ ಸರಾಸರಿಗಿಂತ ಕಡಿಮೆಯಾಗಿದೆ. ಮಳೆ ಮತ್ತು ಸ್ಥಳೀಯ ಕೀಟ ದಾಳಿ ಬದಲಾವಣೆಯು ಬೆಳೆಗಳ(ತೊಗರಿ)ಉತ್ಪಾದನೆಯ ಮೇಲೆ ಪ್ರಭಾವ ಬೀರಿದೆ. ರಸಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ಕ್ರಮಗಳಿಂದ ಜೋಳ ಉತ್ಪಾದನೆ ಮತ್ತು ಉತ್ಪಾದಕತೆ ಉತ್ತಮವಾಗಿದೆ.ತೈಲ ಬೀಜಗಳು ಪ್ರದೇಶದ ಫಲವತ್ತತೆ ಮತ್ತು ಉತ್ಪಾದನೆಯನ್ನು ಕಡಿಮೆ ಮಾಡಿವೆ

 

ವ್ಯವಸಾಯ:-

ಜಿಲ್ಲೆಯಲ್ಲಿ ಕೃಷಿಯು ಮುಖ್ಯವಾಗಿ ಮಳೆಯ ಮೇಲೆ ಅವಲಂಬಿತವಾಗಿದೆ.ಬಿತ್ತನೆಯ ನಿವ್ವಳ ಪ್ರದೇಶಕ್ಕೆ ನೀರಾವರಿಯೂ 14%, ಇದು ರಾಜ್ಯದ ಸರಾಸರಿಗಿಂತ 24% ಕಡಿಮೆ ಇದೆ.ಜಿಲ್ಲೆಯಲ್ಲಿ ಕೃಷ್ಣ, ಭೀಮಾ ನದಿಗಳು ಹರಿಯುತ್ತವೆ.ಜಿಲ್ಲೆಯ ಹತ್ತಿಕುಣಿ ಮತ್ತು ಸೌದಾರದಲ್ಲಿ ಮಧ್ಯಮ ನೀರಾವರಿ ಯೋಜನೆಗಳು .ಜಿಲ್ಲೆಯಲ್ಲಿ 36 ಲಿಫ್ಟ್ ನೀರಾವರಿ ಯೋಜನೆಗಳು ಮತ್ತು 445 ಸಣ್ಣ ನೀರಾವರಿ ಟ್ಯಾಂಕ್ ಇವೆ .ಶಹಾಪುರ ಮತ್ತು ಸುರಪುರ ತಾಲೂಕುಗಳು ಸಂಪೂರ್ಣ ನೀರಾವರಿ ಪ್ರದೇಶವಾಗಿದ್ದು ಯಾದಗಿರಿ ತಾಲೂಕು 65% ನೀರಾವರಿ ಪ್ರದೇಶವನ್ನು ಹೊಂದಿದೆ.ದನ, ಕೋಳಿ, ಕುರಿ, ಆಡುಗಳು ಮತ್ತು ಎಮ್ಮೆಗಳು ಜಿಲ್ಲೆಯ ಪ್ರಮುಖ ಜಾನುವಾರುಗಳನ್ನು ನಿರ್ಧರಿಸುತ್ತವೆ.ಕೋಳಿ ಸಾಕಣೆ ಮತ್ತು ಮೇಕೆ ಪಾಲನೆ ಮಕ್ಕಳಿಗೆ ಹೆಚ್ಚಿನ ಕೆಲಸದ ಹೊರೆಯಾಗಿ ಪರಿಣಮಿಸುತ್ತದೆ. ಪ್ರತಿಶತ 18,73% ಪುರುಷರು ಮತ್ತು 25,86 %ಮಹಿಳೆಯರು ಕೃಷಿಕರಿಗೆ ಇದು ವರ್ಷಪೂರ್ತಿ ಉದ್ಯೋಗ ಸಿಗುವುದಿಲ್ಲ. ಸಂಪೂರ್ಣ ಕುಟುಂಬ ಸದಸ್ಯರು ಅಥವಾ ಪುರುಷ ಕಾರ್ಮಿಕರು ನವೆಂಬರ್ ತಿಂಗಳಿನಲ್ಲಿ ತಾತ್ಕಾಲಿಕ ವಲಸೆ ಹೋಗುವ ಪದ್ಧತಿ ಇರುತ್ತದೆ. ಶಾಲೆಯ ಪಾಲಕರ ಜೊತೆಯಲ್ಲಿ ಮಕ್ಕಳ ಶಾಲೆಗೆ ಹೋಗುವುದರಿಂದ ನೋಂದಾನಿ ಮಾಡಿದರೂ ಸಹ ಅವರು ಶಾಲೆಗೆ ಹಾಜರಾಗಲು ಸಾಧ್ಯವಾಗಿಲ್ಲ.

ಇತ್ತೀಚಿನ ನವೀಕರಣ​ : 11-03-2022 03:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಯಾದಗಿರಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080